ಮಹಾಕವಿ ಕಾಳಿದಾಸ, ೧೯೫೫ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಇದು ಕೆ.ಆರ್.ಸೀತಾರಾಮ್ ಶಾಸ್ತ್ರಿಯವರ ನಿರ್ದೇಶನದ ಚೊಚ್ಚಲ ಚಲನಚಿತ್ರ. ೪-೫ನೇ ಶತಮಾನದಲ್ಲಿ ಜೀವಿಸಿದ್ದ ಸಂಸ್ಕೃತ ಕವಿ ಮಹಾಕವಿ ಕಾಳಿದಾಸನ ದಂತಕಥೆ ಆಧರಿತ ಈ ಚಿತ್ರದಲ್ಲಿ ಶ್ರೀ ಹೊನ್ನಪ್ಪ ಭಾಗವತರ್ ರವರು ಕಾಳಿದಾಸನ ಪಾತ್ರವನ್ನು ನಿರ್ವಹಿಸಿದ್ದರು. ನರಸಿಂಹರಾಜು,ಬಿ.ರಾಘವೇಂದ್ರ ರಾವ್ ಹಾಗು ಬಿ.ಸರೋಜದೇವಿಯವರು ಈ ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಬಿ.ಸರೋಜದೇವಿಯವರ ಚೊಚ್ಚಲ ಚಲನಚಿತ್ರ. ಈ ಚಿತ್ರವನ್ನು ೧೯೬೦ರಲ್ಲಿ, ಅಕ್ಕಿನೇನಿ ನಾಗೇಶ್ವರ್ ರಾವ್ ಅಭಿನಯದಲ್ಲಿ ಮಹಾಕವಿ ಕಾಳಿದಾಸು ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಯಿತು. ೧೯೬೬ರಲ್ಲಿ ಮತ್ತೆ ತಮಿಳಿನಲ್ಲಿ, ಶಿವಾಜಿ ಗಣೆಶನ್ ಅಭಿನಯದ ಮಹಾಕವಿ ಕಾಳಿದಾಸ್ ಎಂಬ ಹೆಸರಿನಲ್ಲಿ ರಿಮೇಕ್ ಗೊಂಡಿತು. ಈ ಚಿತ್ರವು ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಒಂದು ಬಹುಮುಖ್ಯ ಹೆಗ್ಗುರುತು ಎಂದು ಗುರುತಿಸಲ್ಪಟ್ಟಿದೆ. == ಕಥೆ == ಗುರುವಿನಿಂದ ಶಾಪಗ್ರಸ್ಥನಾದ ಒಬ್ಬ ಶ್ರೀಮಂತ ಅಜ್ಞಾನಿಯು ಹೇಗೆ ಸಂಸ್ಕೃತದ ಒಬ್ಬ ಮಹಾನ್ ಕವಿಯಾಗಿ ಬೆಳೆದ ಎಂಬ ಹಂದರವುಳ್ಳ ಕಥೆ. ಈ ಚಿತ್ರವು ೪-೫ನೇ ಶತಮಾನದಲ್ಲಿ ಜೀವಿಸಿದ್ದ ಸಂಸ್ಕೃತದ ಮಹಾಕವಿ ಕಾಳಿದಾಸನ ದಂತಕಥೆಯ ಮೇಲೆ ಅಧಾರಿತವಾಗಿದೆ. == ತಾರಾಗಣ == ಹೊನ್ನಪ್ಪ ಭಾಗವತರ್ ಬಿ.ರಾಘವೇಂದ್ರ ರಾವ್ ನರಸಿಂಹರಾಜು ಬಿ.ಸರೋಜದೇವಿ ರಾಜಸುಲೋಚನ ಬಿ.ಕೆ.ಈಶ್ವರಪ್ಪ == ಪ್ರಶಸ್ತಿಗಳು == ೩ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಕನ್ನಡ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ://../2013/06/06/--1955/